skip to content
icon icon

FREE SHIPPING above Rs.350!*

Follow Us:

Author
Nobel Hygiene

In This Article

ಮೂತ್ರದ ಅಸಂಯಮ ಅಥವಾ ಆಕಸ್ಮಿಕ ಮೂತ್ರ ಸೋರಿಕೆಯನ್ನು ಒಬ್ಬ ವೃದ್ಧ ವ್ಯಕ್ತಿಯ ಪರಿಸ್ಥಿತಿ ಎಂದು ಪರಿಗಣಿಸಬಹುದು. ಆದರೆ ವಾಸ್ತವದಲ್ಲಿ, 5 ಪುರುಷರಲ್ಲಿ 1 ಮತ್ತು 3 ಮಹಿಳೆಯರಲ್ಲಿ 1 ಮಹಿಳೆಗೆ 35 ವರ್ಷದ ನಂತರ ಬಾಧಿಸುತ್ತದೆ. 

ಆಕಸ್ಮಿಕ ಮೂತ್ರ ಸೋರಿಕೆ ಎಂದರೇನು?

ಆಕಸ್ಮಿಕ ಮೂತ್ರ ಸೋರಿಕೆ ಅಥವಾ ಮೂತ್ರದ ಅಸಂಯ ಎಂದರೆ ಒಬ್ಬ ವ್ಯಕ್ತಿಯು ಮೂತ್ರದ ಹರಿವನ್ನು ನಿಯಂತ್ರಿಸಲು ಸಾಧ್ಯವಾಗದೆ   ಇರುವುದು, ಅಥವಾ ಅವರ ಮೂತ್ರಕೋಶದಿಂದ ಹೊರಗೆ ಸೋರಿಕೆಯಾಗುವುದನ್ನು ನಿಲ್ಲಿಸಲು ಸಾಧ್ಯವಾಗದೆ ಇರುವುದು. ವ್ಯಕ್ತಿ  
ನಗುವಾಗ ಅಥವಾ ಸೀನುವಾಗ, ಅಥವಾ ಸಮಯಕ್ಕೆ ಸರಿಯಾಗಿ ಶೌಚಾಲಯವನ್ನು ತಲುಪಲು ಸಾಧ್ಯವಾಗದಿದ್ದಾಗ ಅಥವಾ
 ಮಧುಮೇಹದಂತಹ ವೈದ್ಯಕೀಯ ಸಮಸ್ಯೆಗಳು ಇದ್ದಾಗ ಇದು ಸಂಭವಿಸುತ್ತದೆ.

ಮೂತ್ರದ ಅಸಂಯಮ ಎಂಬುದು ಒಂದು ಸ್ವತಂತ್ರ ಸಮಸ್ಯೆಯಲ್ಲಿ ಆದರೆ ಒಳಗೆ ಅಡಗಿರುವ ಇತರ ಸಮಸ್ಯೆಯ ಲಕ್ಷಣವಾಗಿರಬಹುದು. ಈ ಸಮಸ್ಯೆಗೆ ಚಿಕಿತ್ಸೆ ನೀಡಿದಲ್ಲಿ ಮೂತ್ರ ಸೋರಿಕೆಯ ಸಮಸ್ಯೆ ಕೂಡ ನಿಂತುಹೋಗುವುದನ್ನು ನೀವು ಅನುಭವಿಸಬಹುದು.

ಮೂತ್ರ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಅಸಂಯಮದ ಅರ್ಥ

ಅಸಂಯಮದ ಅರ್ಥವನ್ನು ತಿಳಿದುಕೊಳ್ಳುವುದೆಂದರೆ,ಮೊದಲಿಗೆ, ನೀವು ನಿಮ್ಮ ಮೂತ್ರ ವ್ಯವಸ್ಥೆಯ ಹೇಗೆ ಕೆಲಸ ಮಾಡುತ್ತದೆ ಎಂದು  ಅರ್ಥಮಾಡಿಕೊಳ್ಳಬೇಕು. ಮೂತ್ರಪಿಂಡಗಳು ನಿರಂತರವಾಗಿ ರಕ್ತವನ್ನು ಶುದ್ಧೀಕರಿಸಿ ತ್ಯಾಜ್ಯ ವಸ್ತುಗಳನ್ನು ಮತ್ತು ಅಧಿಕವಾದ ನೀರನ್ನು ಹೊರಹಾಕುತ್ತದೆ. ಶೋಧಿಸಲ್ಪಟ್ಟ ತ್ಯಾಜ್ಯವು ಮೂತ್ರಕೋಶದ ಮೂಲಕ ಮೂತ್ರನಾಳವನ್ನು ತಲುಪಿ ಅಲ್ಲಿ ಸಂಗ್ರಹವಾಗುತ್ತದೆ.        ಸ್ಪಿಂಕ್ಟರ್ ಸ್ನಾಯು ಮೂತ್ರಕೋಶವನ್ನು ಮತ್ತು ಸ್ಪಂಕ್ಟರ್ ಅನ್ನು ಮುಚ್ಚಿರುವಂತೆ ಮಾಡುತ್ತದೆ, ಇದರಿಂದ ಮೂತ್ರವು ಹೊರ ಸೋರುವುದಿಲ್ಲ. ಮೂತ್ರಕೋಶವು ತುಂಬಿದಾಗ, ಸ್ಪಿಂಕ್ಟರ್ ಸ್ನಾಯುಗಳು ಸಡಿಲವಾಗಿ, ಮೂತ್ರಕೋಶ ಸಂಕುಚಿಗೊಳ್ಳುತ್ತದೆ ಮತ್ತು ನೀವು ಆಗ ಮೂತ್ರ
 ವಿಸರ್ಜನೆ ಮಾಡುವಿರಿ.

ಆದರೆ ನೀವು ಈ ಕೆಳಗಿನ ಪರಿಸ್ಥಿತಿಗಳಲ್ಲಿ ಕೂಡ ಅಸಂಯಮವನ್ನು ಹೊಂದಿರಬಹುದು:

  • ದುರ್ಬಲವಾಗಿರುವ ಪೆಲ್ವಿಕ್ ಫ್ಲೋರ್ ಸ್ನಾಯುಗಳು ಮೂತ್ರಕೋಶಕ್ಕೆ ಬೆಂಬಲವನ್ನು ನೀಡಲು ಸ್ಧಾಯವಾಗದೆ ಇರುವುದು.
  • ದುರ್ಬಲ ಸ್ಪಿಂಕ್ಟರ್ ಸ್ನಾಯುಗಳು ಆಗಾಗ ಸಡಿಲಗೊಂಡ ಮೂತ್ರವು ಹೊರಗೆ ಜಾರುವುದು.
  • ಅತಿಯಾಗಿ ಸಕ್ರಿಯವಾಗಿರುವ ಮೂತ್ರಕೋಶ ಸ್ನಾಯುಗಳು ಅನೈಚ್ಛಿಕವಾಗಿ ಸಂಕುಚಿತಗೊಳ್ಳುತ್ತವೆ ಮತ್ತು ಮೂತ್ರವನ್ನು ಹೊರಹಾಕುತ್ತವೆ.

ದುರ್ಬಲವಾಗಿರುವ ಮೂತ್ರಕೋಶದ ಸ್ನಾಯುಗಳು ಮೂತ್ರಕೋಶವನ್ನು ಸಂಪೂರ್ಣವಾಗಿ ಖಾತಿ ಮಾಡಲು ಅಸಮರ್ಥವಾಗಿರುವುದು.

ಆಕಸ್ಮಿಕ ಮೂತ್ರ ಸೋರಿಕೆಯು ಎಷ್ಟು ಸಾಮಾನ್ಯವಾದುದು?

ಜಗತ್ತಿನಾದ್ಯಂತ ಸುಮಾರು 200 ಮಿಲಿಯನ್ ಜನರಿಗೆ ಯಾವುದಾದರೂ ರೀತಿಯ ಮೂತ್ರ ಅಸಂಯಮತೆ ಇದೆ ಎಂದು ಅಂದಾಜು ಮಾಡಲಾಗಿದೆ. ಹಾಗಾಗಿ, ನೀವು ಯೋಚಿಸುವುದಕ್ಕಿಂತಲೂ ಆಕಸ್ಮಿಕ ಮೂತ್ರ ಸೋರಿಕೆಯು ಹೆಚ್ಚು ಸಾಮಾನ್ಯವಾದುದು. ಇದು ಎಲ್ಲಾ ಲಿಂಗದವರನ್ನೂ ಬಾಧಿಸುತ್ತದೆ ಆದರೆ ಮಹಿಳೆಯರಲ್ಲಿ ಗರ್ಭಾವಸ್ಥೆ, ಶಿಶುಜನನ, ಮತ್ತು ಋತುಬಂಧದಿಂದಾಗಿ ಹೆಚ್ಚು ಸಾಮಾನ್ಯವಾಗಿ ಕಂಡುಬರುತ್ತದೆ.

ಇದು 50 ವರ್ಷಗಳು ಮೇಲ್ಪಟ್ಟವರಲ್ಲು ಕೂಡ ಹೆಚ್ಚು ಸಾಮಾನ್ಯ. ಏಕೆಂದರೆ, ಅವರ ನರಗಳು ಹೆಚ್ಚು ಸೂಕ್ಷ್ಮವಾಗುತ್ತವೆ ಹಾಗೂ ಅವರು ತಮ್ಮ ಮೂತ್ರಕೋಶದ ಕಾರ್ಯದ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾರೆ.

ಪುರುಷರಲ್ಲಿ ಮೂತ್ರ ಸೋರಿಕೆ ಅಥವಾ ಪುರುಷ ಅಸಂಯಮ

ಪುರುಷರಲ್ಲಿ ಮೂತ್ರ ಸೋರಿಕೆಯನ್ನು ಪುರುಷ ಅಸಂಯಮ ಎಂದು ಕೂಡ ಕರೆಯುತ್ತಾರೆ. ಒಬ್ಬ ಪುರುಷ ತನ್ನ ಮೂತ್ರಕೋಶವನ್ನು ಸರಿಯಾಗಿ ನಿಯಂತ್ರಸಲು ಸಾಧ್ಯವಾಗದಿದ್ದಲ್ಲಿ ಇದು ಸಂಭವಿಸುತ್ತದೆ ಹಾಗೂ ಅತಿ ಸಾಮಾನ್ಯವಾಗಿರುವುದು ಮೂತ್ರಕೋಶವು ಅತಿಯಾಗಿ ಕ್ರೀಯಾಶೀಲತೆಯಿಂದ.

ಇದಕ್ಕೆ ಹಲವಾರು ಕಾರಣಗಳಿರಬಹುದು, ಉದಾಹರಣೆಗೆ, ದುರ್ಬಲ ಮೂತ್ರಕೋಶದ ಸ್ನಾಯುಗಳು, ಪ್ರಾಸ್ಟ್ರೇಟ್ ಸಮಸ್ಯೆಗಳು, 

ನರಗಳ ಹಾನಿ, ಪೆಲ್ವಿಕ್ ಪ್ರದೇಶದಲ್ಲಿ ಶಸ್ತ್ರಚಿಕಿತ್ಸೆ, ಪಾರ್ಶ್ವವಾಯು, ಪಾರ್ಕಿನ್ಸನ್ ರೋಗದಂತಹ ನರ ಸಂಬಂಧಿ ಕಾಯಿಲೆಗಳು, 

ಅಥವಾ ಮಲ್ಟಿಪಲ್ ಸ್ಕ್ಲೆರೋಸಿಸ್, ಮತ್ತು ಇತರ ವೈದ್ಯಕೀಯ ಸ್ಥಿತಿಗಳಾದ ಮಧುಮೇಹ, ಬೊಜ್ಜು, ಮತ್ತು ದೀರ್ಘಕಾಲದ ಉಸಿರಾಟದ ತೊಂದರೆಗಳು.

ಇದು ನಗುವಾಗ, ಕೆಮ್ಮುವಾಗ, ಅಥವಾ ಭಾರವಾದ ವಸ್ತುಗಳನ್ನು ಎತ್ತುವಾಗ ಆಗಬಹುದು. ಚಿಕಿತ್ಸಾ ಆಯ್ಕೆಗಳೆಂದರೆ ವ್ಯಾಯಾಮ

ಔಷಧೋಪಚಾರ, ಮತ್ತು ಕೆಲವೊಮ್ಮೆ ಶಸ್ತ್ರಚಿಕಿತ್ಸೆ.

ಮಹಿಳೆಯರಲ್ಲಿ ಮೂತ್ರ ಸೋರಿಕೆ ಅಥವಾ ಸ್ತ್ರೀ ಅಸಂಯಮ

ಮಹಿಳೆಯರಲ್ಲಿ ಮೂತ್ರ ಸೋರಿಕೆಯಲ್ಲಿ ಸ್ತ್ರೀ ಅಸಂಯಮ ಎಂದು ಕೂಡ ಕರೆಯುತ್ತಾರೆ. ಇದು ಅತಿಯಾಗಿ ಕ್ರಿಯಾಶೀಲವಾಗಿರುವ 

ಮೂತ್ರಕೋಶ  ಅಥವಾ ಒತ್ತಡಪೂರಿತ ಅಸಂಯಮದಿಂದ ಉಂಟಾಗುತ್ತದೆ. ಮಹಿಳೆಯರು ಮೂತ್ರ ಸೋರಿಕೆಗೆ ಹೆಚ್ಚಾಗಿ ತುತ್ತಾಗುವುದಕ್ಕೆ 

ಕಾರಣಗಳೆಂದರೆ ಅವರ ಅಂಗರಚನೆ,ಶರೀರ ಶಾಸ್ತ್ರ ಮತ್ತು / ಅಥವಾ ಜೈವಿಕ ಪ್ರಕ್ರಿಯೆಗಳು. ಅಸಂಯಮದ ಕಾರಣಗಳು ಈಕೆಳಗಿನವುಗಳನ್ನು ಒಳಗೊಂಡಿರುತ್ತವೆ:

  • ಶಿಶುಜನನ
  • ಋತುಬಂಧ
  • ದುರ್ಬಲವಾದ ಪೆಲ್ವಿಕ್ ಫ್ಲೋರ್ ಸ್ನಾಯುಗಳು

ಇದು ಸೀನುವಾಗ, ನಗುವಾಗ, ಅಥವಾ ವ್ಯಾಯಾಮ ಮಾಡುವಾಗ ಮೂತ್ರ ಸೋರಿಕೆಗೆ ಕಾರಣವಾಗುತ್ತದೆ. ಚಿಕಿತ್ಸೆಗಳೆಂದರೆ, ಪೆಲ್ವಿಕ್ ಫ್ಲೋರ್ ವ್ಯಾಯಾಮಗಳು, ಜೀವನಶೈಲಿ ಬದಲಾವಣೆಗಳು, ಔಷಧೋಪಚಾರಗಳು, ಅಥವಾ ಕೆಲವೊಮ್ಮೆ ಶಸ್ತ್ರಚಿಕಿತ್ಸೆ.

ಆಕಸ್ಮಿಕ ಮೂತ್ರ ಸೋರಿಕೆಯ ಮುಖ್ಯ ವಿಧಗಳು ಯಾವುವು?

ಆಕಸ್ಮಿಕ ಮೂತ್ರ ಸೋರಿಕೆಯನ್ನು ಸೋರಿಕೆಯ ಪ್ರಮಾಣ ಮತ್ತು ಕಾರಣದ ಆಧಾರದ ಮೇಲೆ ವಿಶಾಲವಾಗಿ ಕೆಲವು ವರ್ಗಗಳಾಗಿ ವಿಂಗಡಿಸಲಾಗಿದೆ.

  • ಒತ್ತಡ ಅಸಂಯಮ:

ವ್ಯಕ್ತಿಯು ಸೀನುವಾಗ, ನಗುವಾಗ, ಭಾರವಾಗಿರುವ ವಸ್ತುಗಳನ್ನು ಮೇಲೆತ್ತಿದಾಗ ಅಥವಾ ಮೂತ್ರಕೋಶದ ಮೇಲೆ ಒತ್ತಡದ ಚಟುವಟಿಕೆಗಳನ್ನು ಮಾಡುವಾಗ ಮೂತ್ರ ಸೋರಿಕೆಯಾಗುವುದನ್ನು ಅನುಭವಿಸುತ್ತಾನೆ.

ಮೂತ್ರಕೋಶವನ್ನು ಮುಚ್ಚುವ ಮತ್ತು ತೆರೆಯುವ ಸ್ನಾಯುಗಳು ನಿಯಂತ್ರಣ ಕಳೆದುಕೊಂಡು ದುರ್ಬಲವಾದಾಗ ಇದು ಸಂಭವಿಸುತ್ತದೆ. ಸಣ್ಣ ಪ್ರಮಾಣದಲ್ಲಿ ಸೋರಿಕೆ – ಕೆಲವು ಹನಿಗಳಿಂದ ಚೆಲ್ಲುವ ಪ್ರಮಾಣದವರೆಗೆ

ಹೆಚ್ಚಾಗಿ ಮಹಿಳೆಯರಲ್ಲಿ ಮಗುವಿನ ಜನನದ ನಂತರ, ಗರ್ಭಾವಸ್ಥೆಯಲ್ಲಿ ಅಥವಾ ಋತುಬಂಧದ ಸಮಯದಲ್ಲಿ ಕಾಣಬಹುದು.

  • ಅತಿಯಾಗಿ ಸೋರುವ ಅಸಂಯಮ:

ವ್ಯಕ್ತಿಯು ತನ್ನ ಮೂತ್ರಕೋಶವನ್ನು ಪೂರ್ತಿಯಾಗಿ ಖಾಲಿ ಮಾಡಲು ಸಾಧ್ಯವಾಗದೆ ಇರುವಾಗ ಸಣ್ಣ ಪ್ರಮಾಣದಿಂದ ಮಧ್ಯಮ ಪ್ರಮಾಣದ ಸೋರಿಕೆಯನ್ನು ಅನುಭವಿಸುತ್ತಾನೆ. ಈ ರೀತಿಯ ಅಸಂಯಮದಲ್ಲಿ, ಮೂತ್ರ ವಿಸರ್ಜಿಸುವ ಒತ್ತಡವಿದ್ದರೂ ಸ್ವಲ್ಪ ಪ್ರಮಾಣದ ಮೂತ್ರ ಮಾತ್ರ ಬಿಡುಗಡೆಯಾಗುತ್ತದೆ. ಮೂತ್ರಕೋಶವು ಪೂರ್ತಿ ವಿಸರ್ಜಿಸದ ಕಾರಣ ಅದು ಅತಿಯಾಗಿ ತುಂಬಿ ನಿರಂತರವಾಗಿ ಹನಿ-ಹನಿಯಾಗಿ ಸಣ್ಣ ಪ್ರಮಾಣದಲ್ಲಿ ಹೊರಗೆ ಚೆಲ್ಲಲ್ಪಡುತ್ತದೆ.

ಇದರ ಪರಿಣಾಮವಾಗಿ ಸಣ್ಣ ಪ್ರಮಾಣದ ಮೂತ್ರವು ನಿರಂತರವಾಗಿ ಅಥವಾ ವಿವಿಧ ವಿರಾಮಗಳಲ್ಲಿ ಹೊರಬರುತ್ತದೆ.

ಮಧುಮೇಹ, ಮೂತ್ರಕೋಶದ ಅಡಚಣೆ ಅಥವಾ ಪ್ರಾಸ್ಟ್ರೇಟ್ ಸಮಸ್ಯೆಗಳಿರುವ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

  • ಒತ್ತಡಪೂರಿತ ಅಸಂಯಮ:

ಮೂತ್ರಕೋಶ ಪೂರ್ತಿ ಇರಲಿ ಇಲ್ಲದಿರಲಿ ಹಠಾತ್ ಆಗಿ, ಬಹಳ ತೀವ್ರವಾಗಿ ಮತ್ತು ಅನಿಯಂತ್ರಿತವಾಗಿ ಮೂತ್ರ ವಿಸರ್ಜನೆ ಮಾಡುವ ಅಗತ್ಯವನ್ನು ಸೂಚಿಸುತ್ತದೆ. ಮೂತ್ರಕೋಶವು ಇದ್ದಕ್ಕಿದ್ದಂತೆ ಹಿಸುಕಿದಾಗ ಅಥವಾ ಸೆಳೆತಕ್ಕೊಳಗಾದಾಗ, ಮೂತ್ರವು ಬೇಗನೆ ಹೊರಹಾಕಲ್ಪಡುತ್ತದೆ, ಇದರಿಂದಾಗಿ ಸೋರಿಕೆಯಾಗುತ್ತದೆ. ಮೂತ್ರಕೋಶದ ಸ್ನಾಯು ಅಥವಾ ಅದನ್ನು ನಿಯಂತ್ರಿಸುವ ನರಗಳು ದುರ್ಬಲಗೊಳ್ಳುವುದರಿಂದ ಉಂಟಾಗುತ್ತದೆ. ಇದರ ಪರಿಣಾಮವಾಗಿ ವಿವಿಧ ಪ್ರಮಾಣದ ಆಕಸ್ಮಿಕ ಸೋರಿಕೆಯಾಗುತ್ತದೆ, ವಿಶೇಷವಾಗಿ ರಾತ್ರಿಯಲ್ಲಿ. ಇದು ಹೆಚ್ಚಾಗಿ ವಯಸ್ಸಾದವರಲ್ಲಿ ಕಂಡುಬರುತ್ತದೆ; ಪ್ರಾಸ್ಟೇಟ್ ಕ್ಯಾನ್ಸರ್, ಮಧುಮೇಹ ಅಥವಾ ಮಲ್ಟಿಪಲ್ ಸ್ಕ್ಲೆರೋಸಿಸ್ ಎದುರಿಸುತ್ತಿರುವವರು.

  • ಗರ್ಭಾವಸ್ಥೆಯ ಅಸಂಯಮ:

ಇದು ಗರ್ಭಿಣಿಯರಲ್ಲಿ ಕಂಡುಬರುವ ಅತಿ ಸಾಮಾನ್ಯ ಸಮಸ್ಯೆಯಾಗಿದೆ. ಇದು ಕೆಲವು ಹನಿಗಳಿಂದ ದೊಡ್ಡ ಪ್ರಮಾಣದ ಮೂತ್ರ ಸೋರಿಕೆಯಾಗಿರಬಹುದು. 

ನಿಮ್ಮ ಮಗು ಬೆಳೆಯುತ್ತಿದ್ದರೆ ಗರ್ಭಕೋಶವು ಮೂತ್ರಕೋಶದ ಮೇಲೆ ಹೆಚ್ಚು ಒತ್ತಡವನ್ನುಂಟು ಮಾಡುತ್ತದೆ. ಇದರಿಂದ ಮೂತ್ರಕೋಶವು ಅಧಿಕ ಸಕ್ರಿಯವಾಗುತ್ತದೆ, ಇದು ಮೂತ್ರ ಸೋರಿಕೆಗೆ ಕಾರಣವಾಗಬಹುದು. ಗರ್ಭಾವಸ್ಥೆಯ ಹಾರ್ಮೋನುಗಳು (ವಿಶೇಷವಾಗಿ ಪ್ರೊಜೆಸ್ಟ್ರಾನ್) ಕೂಡ ಅಸಂಯಮವನ್ನು ಉಂಟುಮಾಡಬಹುದು. ಅವು ನಿಮ್ಮ ಮೂತ್ರಕೋಶ ಮತ್ತು ಮೂತ್ರನಾಳದಲ್ಲಿರುವ ಸ್ನಾಯುಗಳನ್ನು ಸಡಿಲಗೊಳಿಸುವುದರಿಂದ ಮೂತ್ರದ ಹರಿವನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ.

ಈ ರೀತಿಯ ಅಸಂಯಮವು ಹೆಚ್ಚಾಗಿ ಮಗುವಿನ ಜನನದ ನಂತರ ಸರಿಯಾಗುತ್ತದೆ. ಆದರೆ ಕೆಲವು ಮಹಿಳೆಯರಿಗೆ ಈ ಸಮಸ್ಯೆ ಮುಂದುವರಿಯುತ್ತದೆ. ಹೀಗಿರುವಾಗ ರೋಗಲಕ್ಷಣಗಳನ್ನು ನಿರ್ವಹಿಸಲು ಹೆಚ್ಚಿನ ಚಿಕಿತ್ಸೆ ಅಗತ್ಯವಿರುತ್ತದೆ.

  • ಕ್ರಿಯಾತ್ಮಕ ಮೂತ್ರ ಅಸಂಯಮ:

ಕ್ರಿಯಾತ್ಮಕ ಮೂತ್ರ ಅಸಂಯಮ ಎಂಬುದು ಮೂತ್ರ ಅಸಂಯಮಗಳಲ್ಲಿ ಒಂದು ರೀತಿಯಾದುದು ಮತ್ತು ಇಲ್ಲಿ ಮೂತ್ರಕೋಶ ಸಮಸ್ಯೆಯಾಗಿರುವುದಿಲ್ಲ. ಮಾನಸಿಕ ಅಥವಾ ದೈಹಿಕ ಮಿತಿಗಳು ವ್ಯಕ್ತಿಯನ್ನು ಶೌಚಾಲಯಕ್ಕೆ ಸಮಯಕ್ಕೆ ಸರಿಯಾಗಿ ಹೋಗಲು ಅಥವಾ ಶೌಚಾಲಯವನ್ನು ಪರಿಣಾಮಕಾರಿಯಾಗಿ ಬಳಸಲು ತಡೆಗಟ್ಟುವುದು. 

ಕ್ರಿಯಾತ್ಮಕ ಅಸಂಯಮಕ್ಕೆ ಕಾರಣಗಳು ಇವುಗಳನ್ನು ಒಳಗೊಂಡಿರಬಹುದು: ದೈಹಿಕ ಮಿತಿಗಳೆಂದರೆ, ನಡೆಯಲು, ಬಟ್ಟೆ ಕಳಚಲು ಅಥವಾ ಧರಿಸಲು ಸಮಸ್ಯೆಗಳು, ಕಣ್ಣು ಸರಿಯಾಗಿ ಕಾಣಿಸದೆ ಇರುವುದು, ಕೀಲುನೋವು, ಸ್ನಾಯುಗಳ ದುರ್ಬಲತೆ, ಅಥವಾ ಪಾರ್ಕಿನ್ಸನ್ ರೋಗ, ಮತ್ತು ಬುದ್ಧಿಮಾಂದ್ಯತೆ ಅಥವಾ ಅಲ್ಝೈಮರ್ ಕಾಯಿಲೆಯಂತಹ ಪರಿಸ್ಥಿತಿಗಳಿಂದಾಗಿ ಅರಿವಿನ ದುರ್ಬಲತೆ.

ಮೂತ್ರ ಸೋರಿಕೆಯನ್ನು ನಾನೇ ಸ್ವತಃ ನಿರ್ವಹಿಸಬಹುದೇ?

ಹೌದು! ಸೋರಿಕೆಯನ್ನು ನಿಯಂತ್ರಿಸಲು ಅನೇಕ ಮನೆಮದ್ದುಗಳಿವೆ, ಅಥವಾ ಮೂತ್ರಕೋಶವನನ್ನು ನಿಯಂತ್ರಿಸಲು ಅಥವಾ ಪೂರ್ತಿ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಪೆಲ್ವಿಕ್ ಫ್ಲೋರ್ ವ್ಯಾಯಾಮಗಳು. ಕೆಲವು ಜನಪ್ರಿಯವಾದವುಗಳೆಂದರೆ:

  • ಪೆಲ್ವಿಕ್ ಫ್ಲೋರ್ ವ್ಯಾಯಾಗಳು-

ಕೈಗಲ್ಸ್ ವ್ಯಾಯಾಮವು ಪೆಲ್ವಿಕ್ ಪ್ರದೇಶದಲ್ಲಿರುವ ಸ್ನಾಯುಗಳನ್ನು ಬಿಗಿಗೊಳಿಸುವುದರಿಂದ ಆ ಮೂಲಕ ಮೂತ್ರವಿಸರ್ಜನೆಯ ಪ್ರಕ್ರಿಯೆಯ ಮೇಲೆ ದೇಹದ ನಿಯಂತ್ರಣವನ್ನು ಪುನರ್ನಿರ್ಮಿಸುತ್ತದೆ.

ಈ ಸುಲಭವಾಗಿ ಮನೆಯಲ್ಲೇ ಮಾಡಬಹುದಾದ ವ್ಯಾಯಾಮಗಳಿಗೆ ಮೂತ್ರ ವಿಸರ್ಜನೆಯ ಸಮಯದಲ್ಲಿ ಹರಿವನ್ನು ನಿಲ್ಲಿಸುವ ಅಥವಾ ನಿಯಂತ್ರಿಸುವ ಸ್ನಾಯುಗಳ ಸರಳ ಬಿಗಿತ ಮತ್ತು ಸಡಿಲಗೊಳಿಸುವ ಅಗತ್ಯವಿರುತ್ತದೆ. ಕೆಗೆಲ್ ವ್ಯಾಯಾಮಗಳು ಪೆಲ್ವಿಕ್ ಸ್ನಾಯುಗಳನ್ನು ದೃಢಗೊಳಿಸಲು ಸಹಾಯ ಮಾಡುತ್ತದೆ, ವಯಸ್ಸಾಗುವಿಕೆ, ಗರ್ಭಧಾರಣೆ ಇತ್ಯಾದಿಗಳಿಂದ ಉಂಟಾಗುವ ಕುಗ್ಗುವಿಕೆಯನ್ನು ಸಾಮಾನ್ಯ ಸ್ಥಿತಿಗೆ ಬರುಲು ಸಹಾಯ ಮಾಡುತ್ತವೆ.

ಸಾಮಾನ್ಯ ಪೆಲ್ವಿಕ್ ಫ್ಲೋರ್ ಸ್ನಾಯುಗಳು    ಸಡಿಲವಾದ ಪೆಲ್ವಿಕ್ ಫ್ಲೋರ್ ಸ್ನಾಯುಗಳು

  • ಮೂತ್ರಕೋಶದ ತರಬೇತಿ 

ಈ ವಿಧಾನವು ಮೂತ್ರವನ್ನು ಪ್ರಜ್ಞಾಪೂರ್ವಕವಾಗಿ, ಆಜ್ಞೆಯ ಮೇರೆಗೆ ಬಿಡುಗಡೆ ಮಾಡಲು ಒಬ್ಬ ವ್ಯಕ್ತಿಯ ಮೂತ್ರಕೋಶವನ್ನು ಮರುತರಬೇತಿಗೊಳಿಸುವುದನ್ನು ಒಳಗೊಂಡಿರುತ್ತದೆ; ಇದ್ದಕ್ಕಿದ್ದಂತೆ ಬದಲಾಗಿ, ಸೆಳೆತಕ್ಕೆ ಪ್ರತಿಕ್ರಿಯೆಯಾಗಿ. ನಿಗದಿತ ಶೌಚಾಲಯದ ಸಮಯದವರೆಗೆ ವ್ಯಕ್ತಿಗಳು ತಮ್ಮ ಮೂತ್ರವನ್ನು ಹಿಡಿದಿಟ್ಟುಕೊಳ್ಳಬೇಕು ಮತ್ತು ನಂತರ ಬಿಡುಗಡೆ ಮಾಡಬೇಕು; ಟಾಯ್ಲೆಟ್ ವಿರಾಮಗಳ ನಡುವಿನ ಮಧ್ಯಂತರವನ್ನು ಕ್ರಮೇಣ ಹೆಚ್ಚಿಸುವುದು.

  • ಅಡಲ್ಟ್ ಡಯಾಪರ್ಸ್-

ವ್ಯಾಯಾಮ ಮಾಡುವಾಗ, ಪ್ರಯಾಣಿಸುವಾಗ, ನಿದ್ದೆ ಮಾಡುವಾಗ ಅಥವಾ ಕೆಲಸ ಮಾಡುವಾಗ ಸಣ್ಣ-ದೊಡ್ಡ ಸೋರಿಕೆಗಳನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಸೋರಿಕೆಯ ನಿರಂತರ ಭಯವನ್ನು ಎದುರಿಸಲು ಸಹಾಯ ಮಾಡಬಹುದು. ಈ ಹೀರಿಕೊಳ್ಳುವ ಒಳ ಉಡುಪುಗಳು ವಾಸನೆಯ ಬಿಡುಗಡೆಯನ್ನು ತಡೆಯುತ್ತವೆ ಮತ್ತು ದೀರ್ಘಕಾಲದ ತೇವಾಂಶದೊಂದಿಗೆ ಬರಬಹುದಾದ ಬ್ಯಾಕ್ಟೀರಿಯಾದ ಸೋಂಕುಗಳಿಂದ ರಕ್ಷಿಸುತ್ತವೆ.

ಮೂತ್ರ ಸೋರಿಕೆಯನ್ನು ನಿರ್ವಹಿಸಲು ನನಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆಯೇ?

ಮೂತ್ರ ಅಸಂಯಮಕ್ಕೆ ಶಸ್ತ್ರ-ಚಿಕಿತ್ಸೆ ಅಗತ್ಯವಿಲ್ಲದ ಮೇಲೆ ತಿಳಿಸಲಾದ ವಿಧಾನಗಳು ನಿಮಗೆ ಕೆಲಸ ಮಾಡದಿದ್ದಲ್ಲಿ ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಿ ಶಸ್ತ್ರಚಿಕಿತ್ಸಾ ವಿಧಾನಗಳ ಅಪಾಯಗಳು ಮತ್ತು ಪ್ರಯೋಜನಗಳ ಬಗ್ಗೆ ಚರ್ಚಿಸಬಹುದು. ಈ ಶಸ್ತ್ರಚಿಕಿತ್ಸೆಗಳು ಹೆಚ್ಚಾಗಿ ಅಸಂಯಮಕ್ಕೆ ಕಾರಣವಾಗುವ ಮೂಲ ಸ್ಥಿತಿಗೆ ಚಿಕಿತ್ಸೆ ನೀಡುವುದನ್ನು ಒಳಗೊಂಡಿರುತ್ತವೆ, ಆದರೆ ಸಾಮಾನ್ಯ ಸ್ಥಿತಿಗೆ ಮರಳಲು ಸಾಧ್ಯವಾಗದಿದ್ದಲ್ಲಿ ಅಸಂಯಮವನ್ನು ಪರಿಹರಿಸಲು ಸಹ ಬಳಸಬಹುದು. ರೋಗಿಗಳು ಸಾಮಾನ್ಯವಾಗಿ ಆಯ್ಕೆ ಮಾಡುವ ಕೆಲವು ಶಸ್ತ್ರಚಿಕಿತ್ಸೆಗಳಲ್ಲಿ ಇವು ಸೇರಿವೆ:

  • ಪ್ರಾಸ್ಟ್ರೇಟ್ ಶಸ್ತ್ರಚಿಕಿತ್ಸೆ:

ಹಿಗ್ಗಿದ ಪ್ರಾಸ್ಟ್ರೇಟ್ ನಿಂದ ಬಳಲುತ್ತಿರುವ ಪುರುಷರಿಗೆ ಇದೊಂದು ಆಯ್ಕೆಯಾಗಿರುತ್ತದೆ. ಈ ಪರಿಸ್ಥಿತಿಯಲ್ಲಿ ಪ್ರಾಸ್ಟ್ರೇಟ್, (ಪುರುಷರಲ್ಲಿ ಕಂಡುಬರುವ ಸಣ್ಣ ವಾಲ್ನಟ್-ಗಾತ್ರದ ಗ್ರಂಥಿ) ಮೂತ್ರನಾಳ (ದೇಹದಿಂದ ಮೂತ್ರವನ್ನು ಹೊರಹಾಕು ಕೊಳವೆ) ಕ್ಕೆ ವಿರುದ್ಧವಾಗಿ ಅದರ ಸಾಮಾನ್ಯ ಗಾತ್ರಕ್ಕಿಂತಲೂ ದೊಡ್ಡದಾಗಿ ಬೆಳೆದು ಮೂತ್ರನಾಳಕ್ಕೆ ಒತ್ತಿದಾಗ ಸೋರಿಕೆಗಳುಂಟಾಗುತ್ತವೆ. ಶಸ್ತ್ರಚಿಕಿತ್ಸೆಯು ಪ್ರಾಸ್ಟ್ರೇಟ್ ಗ್ರಂಥಿಯ ತೆಗೆಯುವಿಕೆ/ಗಾತ್ರವನ್ನು ಕಡಿಮೆ ಮಾಡುವುದನ್ನು ಒಳಗೊಂಡಿರುತ್ತದೆ (ಹೆಚ್ಚಾಗಿ ಲ್ಯಾಪ್ರೋಸ್ಕೋಪಿಕ್)

  • ಸ್ಲಿಂಗ್ ವಿಧಾನ:

ಒತ್ತಡದ ಅಸಂಯಮದೊಂದಿಗೆ ಬಳಲುತ್ತಿರುವವರಿಗೆ ಸೂಕ್ತವಾಗಿದೆ, ಅಲ್ಲಿ ಸಿಂಥಟಿಕ್ ಮೆಟೀರಿಯಲ್ ನ ಮೆಷ್ ಅಥವಾ ದೇಹದ ಅಂಗಾಂಶವನ್ನು ಮೂತ್ರನಾಳ (ಮೂತ್ರವನ್ನು ಸಾಗಿಸುವ ಕೊಳವೆ) ಅದರ ಸ್ಥಳದಲ್ಲಿರಿಸಲು ಹಾಗೂ ಮೂತ್ರವು ಹೊರಚಲ್ಲದೆ ಇರುವುದನ್ನು ಖಚಿತಪಡಿಸಿಕೊಳ್ಳಲು ಬಳಸಲಾಗುವುದು.

  • ಕೃತಕ ಯೂರಿನರಿ ಸ್ಪಿಂಕ್ಟರ್:

ಇದು ನಿಮ್ಮ ಮೂತ್ರಕೋಶದ ಸ್ಪಿಂಕ್ಟರ್ ಸ್ನಾಯುಗಳ ಮೇಲೆ ನಿಯಂತ್ರಣವನ್ನು ಮರುಪಡೆಯಲು ಸಹಾಯ ಮಾಡುತ್ತದೆ -ಮಾರ್ಗಗಳನ್ನು (ಪ್ಯಾಸೇಜಸ್) ತೆರೆಯಲು ಮತ್ತು ಮುಚ್ಚಲು ವೃತ್ತಾಕಾರದ ಸ್ನಾಯುಗಳು.

ನನಗೆ ಮೂತ್ರ ಸೋರಿಕೆಯಿದ್ದಲ್ಲಿ ನನ್ನ ಪ್ರಯಾಣವನ್ನು ನಾನು ಹೇಗೆ ಯೋಜಿಸಬೇಕು?

1. ಔಷಧೋಪಚಾರಕ್ಕೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ:

ನೀವು ಪ್ರಯಾಣಿಸುವ ಮುನ್ನ, ನಿಮ್ಮ ಮೂತ್ರ ಸೋರಿಕೆಯ ಲಕ್ಷಣಗಳನ್ನು ನಿರ್ವಹಿಸುವಂತಹ ಔಷಷಗಳ ಬಗ್ಗೆ ಚರ್ಚಿಸಿ. ಔಷಧಿಗಳನ್ನು ಯಾವಾಗ, ಹೇಗೆ ಮತ್ತು ಎಷ್ಟು ಡೋಸೇಜ್ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಮತ್ತು ನಿಮ್ಮ ಪ್ರಯಾಣಕ್ಕೆ ನೀವು ಚೆನ್ನಾಗಿ ತಯಾರಾಗುವುದನ್ನು ಖಚಿಪಡಿಸಿಕೊಳ್ಳಲು ನಿಮಗೆ ಮಾರ್ಗದರ್ಶನ ಮೀಡುತ್ತಾರೆ. 

2. ಅಗತ್ಯವಿರುವ ವಸ್ತುಗಳಿಗೆ ಒಂದು ಪರಿಶೀಲನಾ ಪಟ್ಟಿಯನ್ನು

ಡಿ:ಹೀರಿಕೊಳ್ಳುವಂತಹ ಉತ್ಪನ್ನಗಳು, ಔಷಧಿಗಳು, ಬದಲಾಯಿಸಲು ಬಟ್ಟೆಗಳು, ಹೈಜೀನ್ ಅಗತ್ಯಗಳಾದ ಫ್ರೆಂಡ್ಸ್ ಅಂಡರ್ ಪ್ಯಾಡ್ಸ್ ಅಥವಾ ಫ್ರಂಡ್ಸ್ ಬೆಡ್ ಬಾತ್ ಟವಲ್ಸ್ ಇತ್ಯಾದಿಗಳನ್ನು ಒಳಗೊಂಡ ಒಂದು ಚೆಕ್ ಲಿಸ್ಟನ್ನು ತಯಾರು ಮಾಡಿ. ಪಟ್ಟಿಯನ್ನು ಹೊಂದಿರುವುದು ನೀವು ಯಾವುದೇ ಅಗತ್ಯ ವಸ್ತುಗಳನ್ನು ಮರೆಯದೆ ಇರಲು ಸಹಾಯ ಮಾಡುತ್ತದೆ ಮತ್ತು ಒತ್ತಡ ಮುಕ್ತರಾಗಿ ಪ್ರಯಾಣಿಸಬಹುದು. 

3. ಬಾತ್ ರೂಂಗೆ ಹೋಗುವುದನ್ನು ಯೋಜಿಸಿ

ನಿಮ್ಮ ಪ್ರಯಾಣದ ಸಮಯದಲ್ಲಿ ಕಾರ್ಯತಂತ್ರದ ವಿರಾಮಗಳನ್ನು ಯೋಜಿಸಲು ಹಾಗೂ ನಿಮಗೆ ತಕ್ಷಣ ಬಾತ್ ರೂಂಗೆ ಹೋಗುವ ಅವಸರವಿಲ್ಲದಿದ್ದರೂ ಮುಂಚಿತವಾಗಿಯೇ ಬಾತ್ ರೂಂ ನಿಲ್ದಾಣಗಳನ್ನು ನೋಡಿಕೊಳ್ಳಿ. ನೀವು ಮುಂಚಿತವಾಗಿಯೇ ಬಾತ್ ರೂಂ ನಿಲ್ದಾಣಗಳನ್ನು ಬಳಸಿದಲ್ಲಿ ಅನಿರೀಕ್ಷತ ಮೂತ್ರ ಸೋರಿಕೆಗೆಳನ್ನು ತಡೆಯಲು ಸಹಾಯವಾಗುತ್ತದೆ ಮತ್ತು ನಿಮ್ಮ ಪ್ರಯಾಣದಾದ್ಯಂತ ಆರಾಮವಾಗಿರಲು ಖಚಿತಪಡಿಸಿಕೊಳ್ಳಬಹುದು.

4. ಪ್ರಯಾಣಕ್ಕಾಗಿಯೇ ಸಣ್ಣ ಗಾತ್ರದ ಹೈಜೀನ್ ಕಿಟ್ ಅನ್ನು ತೆಗೆದುಕೊಂಡು ಹೋಗಿ:

ವೆಟ್ ವೈಪ್ಸ್, ಹ್ಯಾಂಡ್ ಸ್ಯಾನಿಟೈಸರ್, ಮತ್ತು ನಿಮಗೆ ಅಗತ್ಯವಿರುವ ಇತರ ಯಾವುದೇ ವೈಯಕ್ತಿಕ ಹೈಜೀನ್ ವಸ್ತುಗಳನ್ನು ಹೊಂದಿರುವ ಒಂದು ಅಡಕವಾದ ಕಿಟ್ ನಲ್ಲಿ ಪ್ಯಾಕ್ ಮಾಡಿ. ನೀವು ಯಾವುದೇ ತುರ್ತು ಅಥವಾ ತ್ವರಿತ ಕ್ಲೀನ್-ಅಪ್ಸ್ ಗೆ ಸಿದ್ಧವಾಗಿದ್ದೀರಿ ಎಂಬುದನ್ನು ಈ ಕಿಟ್ ಖಚಿತಪಡಿಸುತ್ತದೆ.

5. ಒಂದು ಹೆಚ್ಚುವರಿ ಒಳಉಡುಪನ್ನು ಕೂಡ ನಿಮ್ಮ ಚೀಲಕ್ಕೆ ಸೇರಿಸಿ: 

ನಿಮ್ಮೊಂದಿಗೆ ತೆಗೆದುಕೊಂಡು ಹೋಗುವ ಕ್ಯಾರಿ-ಆನ್ ಅಥವಾ ಡೇ ಬ್ಯಾಗ್ ನಲ್ಲಿ ಕೆಲವು ಹೆಚ್ಚುವರಿ ಒಳಉಡುಪುಗಳನ್ನು ಪ್ಯಾಕ್ ಮಾಡಿ. ಇದು ಸರಳ ಮತ್ತು ತ್ವರಿತ ಪರಿಹಾರವನ್ನು ಒದಗಿಸುತ್ತದೆ, ನಿಮ್ಮ ಪ್ರಯಾಣದ ಸಮಯದಲ್ಲಿ ಆರಾಮ ಮತ್ತು ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಲು ನಿಮಗೆ ಅನುವು ಮಾಡಿಕೊಡುತ್ತದೆ. 

6. ಅಡಲ್ಟ್ ಡಯಪರ್ಸ್ ಅನ್ನು ಸಾಕಷ್ಟು ತೆಗೆದುಕೊಂಡು ಹೋಗಿ: 

ಹೆಚ್ಚುವರಿ ರಕ್ಷಣೆಗಾಗಿ ಫ್ರೆಂಡ್ಸ್ ಅಡಲ್ಟ್ ಡಯಾಪರ್ಸನ್ನು ಪರಿಗಣಿಸಿ, ವಿಶೇಷವಾಗಿ ದೀರ್ಘ ಪ್ರಯಾಣಗಳಲ್ಲಿ. ಅವು ಸುಮಾರು 16 ಗಂಟೆಗಳವರೆಗೆ ವಿಶ್ವಾಸಾರ್ಹ ಹೀರಿಕೆಯನ್ನು ನೀಡುತ್ತವೆ ಮತ್ತು ಪ್ರಯಾಣದಲ್ಲಿರುವಾಗ ಅಸಂಯಮವನ್ನು ನಿರ್ವಹಿಸಲು ವಿವೇಕಯುತ ಪರಿಹಾರ ಕೂಡ.

7. ಹೈಡ್ರೇಟೆಡ್ ಆಗಿರಿ ಆದರೆ ದ್ರವಗಳನ್ನು ಸೇವಿಸುವುದರ ಬಗ್ಗೆ ನಿಗಾವಹಿಸಿ: 

ಹೈಡ್ರೇಷನ್ ಅಗತ್ಯವಿದೆ, ಆದರೆ ದ್ರವಾಹಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರವಾಗಿರಿ, ವಿಶೇಷವಾಗಿ ನಿಮ್ಮ ಪ್ರಯಾಣಕ್ಕಿಂತ ಮುಂಚೆ. ಅತಿಯಾಗಿ ಕೆಫಿನ್ ಮತ್ತು ಅಸಿಡಿಕ್ ಪಾನೀಯಗಳು ಸೇವಿಸುವುದನ್ನು ತಪ್ಪಿಸಿ, ಏಕೆಂದರೆ ಇವು ಮೂತ್ರಕೋಶವನ್ನು ಕಿರಿಕಿರಿಗೊಳಿಸಬಹುದು ಮತ್ತು ಮೂತ್ರ ವಿಸರ್ಜನೆಯ ಅವಸರ ಪರಿಸ್ಥಿತಿಗೆ ಕಾರಣವಾಗಬಹುದು. 

8. ಒಳ್ಳೆಯ ಆಹಾರವನ್ನು ಸೇವಿಸಿ: 

ಮೂತ್ರ ಅಸಂಯಮವನ್ನು ಮತ್ತಷ್ಟು  ಹೆಚ್ಚಿಸುವಂತಹ ಆಹಾರಗಳು ಮತ್ತು ಪಾನೀಯಗಳನ್ನು ತಪ್ಪಿಸಿ ಸಮತೋಲಿತ ಆಹಾರವನ್ನು ಸೇವಿಸಿ. ಮಸಾಲೆಯುಕ್ತ ಆಹಾರಗಳು ಮತ್ತು ಕೃತಕ ಸಿಹಿಕಾರಕಗಳು ಮೂತ್ರಕೋಶವನ್ನು ಕಿರಿಕಿರಿಗೊಳಿಸಬಹುದು, ಆದ್ದರಿಂದ ನಿಮ್ಮ ಆಹಾರ ಆಯ್ಕೆಗಳ ಬಗ್ಗೆ ಎಚ್ಚರವಹಿಸಿ.

ಬದುಕಲು ನಾಲ್ಕು ದಿನಗಳಿವೆಉಳಿದ ದಿನಗಳು ವ್ಯರ್ಥ! ಹಾಗಾಗಿ ಒತ್ತಡವನ್ನು ಬಿಟ್ಟು ನಿಮ್ಮ ಪ್ರವಾಸವನ್ನು ಆನಂದಿಸಿ. ಸರಿಯಾದ ಯೋಜನೆಯೊಂದಿಗೆ, ಸರಿಯಾದ ಮನಸ್ಥಿತಿಯಿಂದ ಹಾಗೂ ಈ ಸಲಹೆಗಳಿಂದ ನೀವು ನಿಮ್ಮ ಪ್ರಯಾಣವನ್ನು ಆತ್ಮವಿಶ್ವಾಸದೊಂದಿಗೆ ನ್ಯಾವಿಗೇಟ್ ಮಾಡಬಹುದು, ಅಸಂಯಮವು ನಿಮ್ಮ ಪ್ರವಾಸದ ಆನಂದಕ್ಕೆ ಧಕ್ಕೆಯಾಗುವುದಿಲ್ಲ ಎಂಬುದನ್ನು ಖಚಿಪಡಿಸಿಕೊಳ್ಳಿ. ಸುರಕ್ಷಿತವಾಗಿ ಪ್ರಯಾಣಿಸಿ!

ನಿಮ್ಮ ಪ್ರವಾಸಕ್ಕೆ ಖರೀದಿಸಬಹುದಾದ ಸೂಕ್ತವಾದ ಫ್ರೆಂಡ್ಸ್ ಉತ್ಪನ್ನ ಯಾವುದು?

ನಿಮ್ಮ ಪ್ರಯಾಣದ ಬಕೆಟ್ ಲಿಸ್ಟನ್ನು ನಿಭಾಯಿಸಲು ನೀವು ಸಿದ್ಧರಿದ್ದೀರಾ? ನಿಮ್ಮ ಪ್ರವಾಸದಾದ್ಯಂತ ನಿಮ್ಮ ವಿಶ್ವಾಸನೀಯ ಸ್ನೇಹಿತರಾಗಿರಬಹುದಾದ ಕೆಲವು ಫ್ರೆಂಡ್ಸ್ ಉತ್ಪನ್ನಗಳು ಇಲ್ಲಿವೆ:

ಪುರುಷ ಮತ್ತು ಸ್ತ್ರೀಯರಿಗೆ ಅಲ್ಟ್ರಾ ಥಿನ್ ಸ್ಲಿಂ ಫಿಟ್ ಡ್ರೈ ಪ್ಯಾಂಟ್ಸ್ –

ನೀವು ಬಾಂದ್ರಾದಿಂದ ಚರ್ಚ್ ಗೇಟ್ ವರೆಗೂ ಪ್ರಯಾಣಿಸಬೇಕಿದ್ದಲ್ಲಿ ಈ ಅಡಲ್ಟ್ ಡಯಾಪರ್ ಪ್ಯಾಂಟ್ಸ್ ಅನ್ನು ಬಳಸಬಹುದು. ಈ ಕಡಿಮೆ ಪ್ರಯಾಣದ ಸಮಯದಲ್ಲಿ ಸ್ಥಳೀಯ ರೈಲಿನಲ್ಲಿ ಗುಂಪಿನಂದ ನೀವು ನೂಕಲ್ಪಟ್ಟಾಗ ಅಥವಾ ಸೀನುವಾಗ, ಕೆಮ್ಮುವಾಗ, ನಗುವಾಗ, ಅಥವಾ ಕುಳಿತುಕೊಳ್ಳುವಾಗ ಸಣ್ಣ ಪ್ರಮಾಣದ ಮೂತ್ರವನ್ನು ಕಳೆದುಕೊಳ್ಳಬಹುದು (ಸುಮಾರು 10 ಎಂಎಲ್). ನೀವು ಪ್ಯಾಂಟ್ಸ್, ಸ್ಕರ್ಟ್ಸ್ ಅಥವಾ ಸೀರೆಗಳು ಯಾವುದು ಧರಿಸಿದರೂ ಈ ಸೂಪರ್ ಸ್ಲಿಂ ಡ್ರೈ ಪ್ಯಾಂಟ್ಸ್ ಅನ್ನು ನಿಮ್ಮ ಒಳಉಡುಪುಗಳ ಒಳಗೆ ಪ್ರತಿನಿತ್ಯ ಧರಿಸಬಹುದು.

 ಕ್ಲಾಸಿಕ್ ಡ್ರೈ ಪ್ಯಾಂಟ್ಸ್ –

ನೀವು ಮುಂಬೈನಿಂದ ಪುಣೆಗೆ 3 ಗಂಟೆಗಳ ದೂರವಿರುವ ರಸ್ತೆಮಾರ್ಗದ ಮೂಲಕ ಪ್ರಯಾಣಿಸುತ್ತಿದ್ದರೆ ಕ್ಲಾಸಿಕ್ ಡ್ರೈ ಪ್ಯಾಂಟ್ ನಿಮಗಾಗಿ ಸದಾ ಸಹಾಯಮಾಡಲು ಸಿದ್ಧವಿರುತ್ತದೆ. ನೀವು ಮಧುಮೇಹದಿಂದ ಬಳಲುತ್ತಿರಬಹುದು ಅಥವಾ ಮೂತ್ರದ ನಿಯಂತ್ರಣ ಸಮಸ್ಯೆಗಳನ್ನು ಹೊಂದಿರಬಹುದು ಆದ್ದರಿಂದ ನೀವು ಸಮಯಕ್ಕೆ ಶೌಚಾಲಯವನ್ನು ತಲುಪದಿದ್ದರೆ ನೀವು ಪ್ರತಿ ಬಾರಿ ಸುಮಾರು 100 ಮಿಲಿ ಮೂತ್ರವನ್ನು ಸೋರಿಕೆ ಮಾಡಬಹುದು.

ಪ್ರೀಮಿಯಂ ಡ್ರೈ ಪ್ಯಾಂಟ್ಸ್ 

ನೀವು ಮುಂಬೈನಿಂದ ಗೋವಾಕ್ಕೆ ಸುಮಾರು 9 ಗಂಟೆಗಳ ದೂರವಿರುವ ರೈಲಿನಲ್ಲಿ ಪ್ರಯಾಣಿಸುವಾಗ ಪ್ರೀಮಿಯಂ ಡ್ರೈ ಪ್ಯಾಂಟ್ ಧರಿಸಿ. ನೀವು ಭಾರೀ ಮೂತ್ರ ಸೋರಿಕೆ ಸಮಸ್ಯೆಗಳನ್ನು ಹೊಂದಿದ್ದೀರಿ (ಅಂದಾಜು. 300 ಮಿಲಿ) ಮತ್ತು ಡಯಾಪರ್ ಅನ್ನು 2-3 ಬಾರಿ ಸಂಪೂರ್ಣವಾಗಿ ಡಯಾಪರ್ ಒಳಗಡೆಗೆ ವಿಸರ್ಸಿಜಿಸಬೇಕಾಗುತ್ತದೆ.

 ಓವರ್ನೈಟ್ ಡ್ರೈ ಪ್ಯಾಂಟ್ಸ್ 

ಅಂತರರಾಷ್ಟ್ರೀಯ ವಿಮಾನಗಳು ಮತ್ತು ಪ್ರಯಾಣಗಳಿಗಾಗಿ ತಮಗೇ ತಿಳಿಯದಂತೆ ಅಥವಾ ಅವರು ನಿದ್ದೆ ಮಾಡುವಾಗ ಭಾರಿ ಪ್ರಮಾಣದ (500 ಎಂಎಲ್) ಮೂತ್ರ ಸೋರಿಕೆಯನ್ನು ಅನುಭವಿಸುವ ಜನರಿಗೆ ಅಥವಾ ಸಾರ್ವಜನಿಕ ಶೌಚಾಲಯಗಳ ತೊಂದರೆಯನ್ನು ನಿಭಾಯಿಸಲು ಸಾಧ್ಯವಾಗದವರಿಗೆ ಫ್ರೆಂಡ್ಸ್ ಓವರ್ನೈಟ್ ಡ್ರೈ ಪ್ಯಾಂಟ್ಸ್ ಅನ್ನು ತಯಾರಿಸಲ್ಪಟ್ಟಿದೆ. 

ಅಡಲ್ಟ್ ಡಯಾಪರ್ಗಳ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಅಂಶಗಳು:

  • ಸರಿಯಾದ ಗಾತ್ರ:

ಸರಿಯಾದ ಗಾತ್ರದ ಡಯಾಪರ್ ಅನ್ನು ಕಂಡುಹಿಡಿಯುವುದು ಅಸಂಯಮದ ವಿರುದ್ಧದ ಅರ್ಧದಷ್ಟು ಹೋರಾಟವನ್ನು ಗೆದ್ದಂತೆ! ನಿಮಗೆ ಆರಾಮವಾಗಿ ಫಿಟ್  ಆಗುವ ಡಯಾಪರ್ ಸೈಜನ್ನು ಪಡೆಯಿರಿ. ಸಡಿಲವಾಗಿರುವ ಡಯಾಪರ್ ಹೊರಗೆ ಸೋರಬಹುದು ಮತ್ತು ಬಿಗಿಯಾಗಿರುವ ಡಯಾಪರ್ ನಿಮ್ಮ ರಕ್ತದ ಹರಿವಿಗೆ ತೊಂದರೆಯಾಗಬಹುದು. 

  • ಹೀರಿಕೊಳ್ಳುವಿಕೆ:

ಹೀರಿಕೊಳ್ಳುವ ಡಯಾಪರ್ ನಿಮ್ಮನ್ನು ತೇವಾಂಶದಿಂದ ದೂರವಿರಿಸುತ್ತದೆ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳು, ದದ್ದುಗಳು ಮತ್ತು ಅಸ್ವಸ್ಥತೆಯನ್ನು ತಡೆಯುತ್ತದೆ. ಯಾವುದೇ ಉಕ್ಕಿ ಹರಿಯುವುದನ್ನು ತಪ್ಪಿಸಲು ನೀವು ಅನುಭವಿಸುವ ಸೋರಿಕೆಗಳ ಪ್ರಕಾರ ಡಯಾಪರ್ ವೇರಿಯಂಟ್ ಅನ್ನು ಪರಿಗಣಿಸಿ.

  • ಭಾರವಾಗುವ:

ಡಯಾಪರ್ಗಳು 2-3 ಸೋರಿಕೆಯ ಆವರ್ತನಗಳ ನಂತರ ಭಾರವಾಗುತ್ತವೆ! ಏಕೆಂದರೆ, ಡಯಾಪರ್ ದ್ರವವನ್ನು ಹೋಗಲಾಡಿಸುವುದಿಲ್ಲ, ಇದು ಕೇವಲ ಜೆಲ್ ರೂಪಕ್ಕೆ ಪರಿವರ್ತಿಸುತ್ತದೆ ಮತ್ತು ಅದರೊಳಗೆ ಹಿಡಿದಿಟ್ಟುಕೊಳ್ಳುತ್ತದೆ. ಹಾಗಾಗಿ, ನಿಮಗೆ ತೇವಾಂಶದ ಅನುಭವ ಆಗದಿದ್ದರೂ ಡಯಾಪರ್ ಸ್ವಲ್ಪ ಭಾರವಾಗಬಹುದು.

  • ಹೆಚ್ಚು ಧರಿಸುವಿಕೆ:

ಡಯಾಪರ್ಗಳನ್ನು ಅತಿಯಾಗಿ ಧರಿಸುವುದು ಒಳ್ಳೆಯ ನಿರ್ಧಾರವಲ್ಲ. ಯಾವುದೇ ಸೋರಿಕೆ ಅಥವಾ ಚೆಲ್ಲುವಿಕೆ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಆಯ್ಕೆಯ ಫ್ರೆಂಡ್ಸ್ ಅಡಲ್ಟ್ ಡಯಾಪರ್ಸ್ ಮೇಲೆ ತಿಳಿಸಲಾಗಿರುವ ಮಾರ್ಗಸೂಚಿಗಳನ್ನು ಅನುಸರಿಸಿ,

  • ವಿಲೇವಾರಿ:

ಡಯಾಪರ್ಗಳನ್ನು ಅದರೊಳಗೆ ಸುತ್ತಿ ಹೊರಗೆ ಬಿಸಾಡಿ, ಅಥವಾ ಅದರಲ್ಲಿ ಮಲದ ಅಂಶವಿದ್ದಲ್ಲಿ ಮೊದಲು ಅದನ್ನು ಶೌಚಾಲಯದಲ್ಲಿ ಖಾಲಿ ಮಾಡಿ. ಸುತ್ತಲಾದ ಈ ಡಯಾಪರ್ ಅನ್ನು ಒಂದು ನ್ಯೂಸ್ ಪೇಪರ್ ಅಥವಾ ಪ್ಲಾಸ್ಟಿಕ್ ಚೀಲಕ್ಕೆ ಹಾಕಿ ಕಸದಬುಟ್ಟಿಗೆ ಎಸೆಯಿರಿ.


Product Recommendations


ಅಸಂಯಮತೆ/ಆಕಸ್ಮಿಕ ಮೂತ್ರ ಸೋರಿಕೆಯೊಂದಿಗೆ ಜೀವಿಸುವುದು

ಅಸಂಯಮವನ್ನು ನಿಭಾಯಿಸುವುದು ಕಠಣವಾಗಿರಬಹುದು, ವಿಶೇಷವಾಗಿ ನೀವು ನಿಮ್ಮೊಂದಿಗೆ ಹೋರಾಡುವಂತೆ ಅನುಸ್ತುತದೆ. ಆಗಾಗ ನೀವು ಶೌಚಾಲಯಕ್ಕೆ ಹೋಗುವುದು, ನೋವು ಮತ್ತು ಮುಜುಗರವು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದರೆ ನೆನಪಿಡಿ, ಹೀಗಿರುವುದು ನೀವು ಮಾತ್ರವಲ್ಲ. ನಿಮ್ಮ ವೈದ್ಯರು ಮತ್ತು ನಿಮ್ಮ ಪ್ರೀತಿಪಾತ್ರರಿಂದ ಸಹಾಯವನ್ನು ಪಡೆಯಿರಿ. ನೀವು ಎದುರಿಸುತ್ತಿರವ ಸಮಸ್ಯೆಗಳನ್ನು ಎದುರಿಸುತ್ತಿರವ ಸಹಾಯ ಗುಂಪುಗಳಿಗೆ ಸೇರಿ. ನಿಮ್ಮ ಪ್ರಯಾಣವನ್ನು ಸುಗಮವಾಗಿಸಲು ಸ್ನೇಹಿತರು ಯಾವಾಗಲೂ ನಿಮ್ಮೊಂದಿಗಿರುತ್ತಾರೆ ಮತ್ತು ನಮ್ಮ ಟೋಲ್-ಫ್ರೀ ಸಂಖ್ಯೆ 1800 266 0640 😊 ಗೆ ಕರೆ ಮಾಡಿದಲ್ಲಿ ನಿಮಗೆ ಮಾರ್ಗದರ್ಶನ ನೀಡಲು ಸದಾ ಸಿದ್ಧರಿರುತ್ತಾರೆ.

ಆಗಾಗ ಕೇಳಲಾಗುವ ಪ್ರಶ್ನೆಗಳು (ಎಫ್ ಎ ಕ್ಯೂಗಳು)

ಡಯಾಪರ್ಗಳನ್ನು ಧರಿಸುವುದರಿಂದ ದದ್ದುಗಳುಂಟಾಗುತ್ತವೆಯೇ?

ಒಳ್ಳೆಯ ಗುಣಮಟ್ಟದ ಅಂದರೆ ಉತ್ತಮ ಬ್ರ್ಯಾಂಡ್ಸ್ ಆಗಿರುವ ಫ್ರೆಂಡ್ಸ್ ಅಡಲ್ಟ್ ಡಯಾಪರ್ಗಳನ್ನು ಧರಿಸಿದರೆ ದದ್ದುಗಳುಂಟಾಗುವುದಿಲ್ಲ! ಫ್ರೆಂಡ್ಸ್ ಡಯಾಪರ್ಸ್ ಅನ್ನು ಅತ್ಯುತ್ತಮ ಗುಣಮಟ್ಟದ ಹತ್ತಿಯ ಫೈಬ್ರಸ್ ವಸ್ತುವಿನಿಂದ ತಯಾರಿಸಲ್ಪಟ್ಟಿದೆ ಮತ್ತು ಇದು ಚರ್ಮಕ್ಕೆ ಕಿರಿ ಕಿರಿಯಾಗಲಿ ತುರಿಕೆಯಾಗಲಿ ಉಂಟುಮಾಡುವುದಿಲ್ಲ. ಇವು ಹೆಚ್ಚು ಹೀರಿಕೊಳ್ಳಬಲ್ಲವು. ಸೋರಿಕೆಗಳಿಂದ ತಕ್ಷಣ ಒದ್ದೆಯಾಗುತ್ತವೆ ಮತ್ತು ಚರ್ಮವು ತೇವಾಂಶದೊಂದಿಗೆ ದೀರ್ಘಕಾಲ ಸಂಪರ್ಕದಲ್ಲಿ ಇಲ್ಲದೆ ಇರುವುದನ್ನು ಖಚಿತಪಡಿಸಿಕೊಳ್ಳುತ್ತವೆ.

ಡಯಾಪರ್ಗಳ ಬೆಲೆ ದುಬಾರಿಯೇ?

ಇಲ್ಲ! ಫ್ರೆಂಡ್ಸ್ ಡೈಪರ್‌ಗಳು ₹50 ರಿಂದ ಪ್ರಾರಂಭವಾಗುವ ಮತ್ತು ಪ್ರತಿ ಪೀಸ್ಗೆ ₹71 ರವರೆಗೆ ವ್ಯಾಪಕ ಬೆಲೆಯ ಶ್ರೇಣಿಯಲ್ಲಿ ಲಭ್ಯವಿದೆ. ನಿಮ್ಮ ಅಗತ್ಯಕ್ಕೆ ಸರಿಹೊಂದುವ ಡೈಪರ್ಗಳನ್ನು ನೀವು ಖರೀದಿಸಬಹುದು. ಸೋರಿಕೆಗಳಿಂದ ಉಂಟಾಗುವ ಮಾನಸಿಕ ಹಿಂಸೆ ಮತ್ತು ಮುಜುಗುರ ಎದುರಿಸುವುದಕ್ಕಿಂತ ಉತ್ತಮ ಡಯಾಪರ್ನಲ್ಲಿ ಹೂಡಿಕೆ ಮಾಡುವುದು ಉತ್ತಮವಾಗಿದೆ.

ನನ್ನ ಮೂತ್ರ ಸೋರಿಕೆಯನ್ನು ಹದಗೆಡಿಸುವ ಜೀವನಶೈಲಿಯ ಸಮಸ್ಯೆಗಳು ಯಾವುವು?

ಜೀವನಶೈಲಿಯ ಕೆಲವು ಅಭ್ಯಾಸಗಳೆಂದರೆ, ಧೂಮಪಾನ, ಮದ್ಯಪಾನ, ಮಸಾಲೆಯುಕ್ತ ಆಹಾರಗಳನ್ನು ಸೇವಿಸುವುದು, ಸಿಟ್ರಸಿ ಹಣ್ಣುಗಳು, ಕೇಫಿನ್ ಇರುವ ಆಹಾರಗಳು ಮತ್ತು ಪಾನೀಯಗಳನ್ನು ಸೇವಿಸುವುದರಿಂದ, ಹಾಗೂ ದೇಹದ ತೂಕವನ್ನು ಕಾಪಾಡದೆ ಇರುವುದರಿಂದ ಮೂತ್ರ ಸೋರಿಕೆ ಸಮಸ್ಯೆಗಳು ಉಲ್ಭಣವಾಗಬಹುದು.

ಹಿಗ್ಗಿದ

ಪ್ರಾಸ್ಟ್ರೇಟ್ ಹೊಂದಿರುವುದು ಆಕಸ್ಮಿಕ ಮೂತ್ರ ಸೋರಿಕೆಯೊಂದಿಗೆ ಹೇಗೆ ಸಂಬಂಧ ಹೊಂದಿದೆ?

ಪ್ರಾಸ್ಟೇಟ್ ಗ್ರಂಥಿಯು ಪುರುಷರಲ್ಲಿ ಮೂತ್ರಕೋಶದ ಕೆಳಗೆ ಇರುತ್ತದೆ ಮತ್ತು ಮೂತ್ರಕೋಶದಿಂದ (ಮೂತ್ರನಾಳ) ಮೂತ್ರವನ್ನು ಹೊರಹಾಕುವ ಕೊಳವೆಯ ಮೇಲ್ಭಾಗವನ್ನು ಸುತ್ತುವರೆದಿದೆ. ಪ್ರಾಸ್ಟೇಟ್ ಗ್ರಂಥಿ ಹಿಗ್ಗಿದಾಗ, ಅದು ಮೂತ್ರನಾಳವನ್ನು ಹಿಸುಕಬಹುದು. ಈ ಸಂಕುಚನವು ಮೂತ್ರಕೋಶವನ್ನು ಸಂಪೂರ್ಣವಾಗಿ ಖಾಲಿ ಮಾಡುವಲ್ಲಿ ತೊಂದರೆಗಳಿಗೆ ಕಾರಣವಾಗಬಹುದು ಮತ್ತು ಮೂತ್ರಕೋಶದ ಗೋಡೆಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಕಾಲಾನಂತರದಲ್ಲಿ, ವಿಶೇಷವಾಗಿ ಕೆಮ್ಮು ಅಥವಾ ತೂಕ ಎತ್ತುವಿಕೆಯಂತಹ ಮೂತ್ರಕೋಶದ ಮೇಲೆ ಒತ್ತಡ ಹೇರುವ ಚಟುವಟಿಕೆಗಳ ಸಮಯದಲ್ಲಿ ಈ ಹೆಚ್ಚಿದ ಒತ್ತಡವು ಅನೈಚ್ಛಿಕ ಮೂತ್ರ ಸೋರಿಕೆಗೆ ಕಾರಣವಾಗಬಹುದು.
ನೀವು ಅಥವಾ ನಿಮ್ಮ ಪ್ರೀತಿ ಪಾತ್ರರು ಮೂತ್ರ ಸೋರಿಕೆಯನ್ನು ಅನುಭವಿಸುತ್ತಿದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಲು ಹೇಳಿ, ಏಕೆಂದರೆ ಹಿಗ್ಗಿದ ಪ್ರಾಸ್ಟ್ರೇಟ್ ನಿಂದ ಇದು ಉಂಟಾಗಿರಬಹುದು.

To get updated on the latest stories across categories choose